ಬೆಳ್ಳಾರೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ಳಾರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ಳಾರೆ ವಲಯ ಬಿಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ಅ. 01 ರಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ನಷೆಯೆಂಬ ನರಕ ಎಂಬ ಕಿರು ಚಿತ್ರದ ವೀಕ್ಷಣೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಶಾಲಾ ಮುಖಂಡ ದೀಕ್ಷಿತ್ ಮತ್ತು ಕುಮಾರಿ ಸಹನ ಉದ್ಘಾಟಿಸಿದರು. ಮೇಲ್ವಿಚಾರಕಿ ವಿಶಾಲ ಅವರು ಪ್ರಾಸ್ತಾವಿಕ ಮಾತಗಳನ್ನಾಡಿ ಇಂದಿನ ಮಕ್ಕಳು, ದುಶ್ಚಟಕ್ಕೆ ಬಲಿಯಾಗದೆ ದೂರವಿದ್ದರೆ ಮುಂದಿನ ಪೀಳಿಗೆಯಲ್ಲಿ ದುಶ್ಚಟ ರಹಿತ ದೇಶವನ್ನಾಗಿ ಮಾಡಬಹುವುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಜನಾರ್ಧನ್ ಕೆ.ಎನ್., ಮುಖ್ಯ ಅತಿಥಿ ವಿಶ್ವನಾಥ ರೈ ಕಳಂಜಾ, ಸುಳ್ಯ ತಾಲೂಕು ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷೆ ವಿಶಾಲ, ಬೆಳ್ಳಾರೆ ವಲಯ ಶ್ರೀ ಕ್ಷೇ. ಧ. ಗ್ರಾ. ಯೋಜನೆ ಮೇಲ್ವಿಚಾರಕಿ ನಿರ್ಮಲಾ ಜಯರಾಮ್, ವಲಯ ಅಧಿಕಾರಿ, ವಲಯ 15 ಜೆಸಿಐ ಭಾರತ ವೇದ ಶೆಟ್ಟಿ ವಲಯ ಅಧ್ಯಕ್ಷರು ಪ್ರ. ಬ ಸ್ವ. ಸ ಗಳ ಒಕ್ಕೂಟ ಬೆಳ್ಳಾರೆ ವಲಯ ವೀಣಾ, ಉಪಾಧ್ಯಕ್ಷರು ಪ್ರ. ಬ. ಸ್ವ. ಸ. ಗಳ ಒಕ್ಕೂಟದ ಬೆಳ್ಳಾರೆ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿ ಶರಧಿ ಮತ್ತು ವಿಹಾರಿಕ ಪ್ರಾರ್ಥಸಿ, ಅಮರ ಪಡ್ನರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ದಿವ್ಯ ಇವರು ಸ್ವಾಗತಿಸಿ, ಕೆಪಿಸಿ ಶಾಲಾ ರಾಜ್ಯಶಾಸ್ತ್ರ ಉಪನ್ಯಾಸಕ ಮಹೇಶ್ ಪಿ. ಧನ್ಯವಾದ ಮಾಡಿದರು. ಬೆಳ್ಳಾರೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹರಿಣಾಕ್ಷಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.