ಅಜ್ಜಾವರ: ವತಿಯಿಂದ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಚಹಾಕೂಟ

ಅಜ್ಜಾವರ: ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.16 ರಂದು ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಸಾರ್ವಜನಿಕ ಚಹಾಕೂಟವು ಅಜ್ಜಾವರದಲ್ಲಿ ನಡೆಯಿತು.

ಮುಹಿಯುದ್ದೀನ್ ಜುಮಾ ಮಸೀದಿ ಅಜ್ಜಾವರ ವಠಾರದಲ್ಲಿ ಬೆಳಿಗ್ಗೆ 8.30 ಸರಿಯಾಗಿ ತಖ್ ವಿಯ್ಯತ್ತಲ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ಲ್ ಖಾದರ್ ಹಾಜಿ, ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿರವರು ಧ್ವಜಾರೋಹಣ ನೆರವೇರಿಸಿದರು. ನಂತರ ನೂರುಲ್ ಇಸ್ಲಾಂ ಮದ್ರಾಸ ಅಜ್ಜಾವರ, ಮೇನಾಲ, ಬಯಂಬು ಮತ್ತು ಕಲ್ತಡ್ಕ ವಿದ್ಯಾರ್ಥಿಗಳ ಅತ್ಯಾರ್ಕಾಷಕವಾದ ವೀಲಾದ್ ಜಾಥ ಹಾಗೂ ಮದ್ರಾಸ ವಿದ್ಯಾರ್ಥಿಗಳಿಂದ ಧಫ್ ಮತ್ತು ಸ್ಕೌಟ್ ನಡೆಯಿತು.

ಬಹು|ಹಸೈನಾರ್ ಫೈಝಿ ಶನಿವಾರಸಂತೆ ಖತೀಬರು ಎಂ.ಜೆ.ಎಂ ಅಜ್ಜಾವರ- ಮೇನಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ನಾಸರ್ ಕೆ.ಹೆಚ್ ರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಬಾಸ್ಕರ್ ರಾವ್ ಮಾಲಕರು ರೇಷನಲ್ ಇಂಜನಿಯರಿಂಗ್ ವರ್ಕ್ ಗಾಂಧಿನಗರ ಸುಳ್ಯ, ಇವರು ವಹಿಸಿದ್ದರು. ಮರ್ ಹೂಂ ಶಂಸುಬಯಂಬು,ಹೋಟೆಲ್ ಮುಸ್ತಫ, ಅಬ್ದುಲ್ಲ್ ಖಾದರ್, ಕೆ.ಹೆಚ್ ಮಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ| ಅವಿನಾಶ್ ಕೆ.ವಿ ಪ್ರೂಫೆಸರ್ ಕೆ.ವಿ.ಜಿ ಆಯುರ್ವೇದ ಕಾಲೇಜು, ಸುಳ್ಯ, ಜನಾಬ್ ಅಬ್ದುಲ್ಲ್ ಖಾದರ್ ಹಾಜಿ ಅಧ್ಯಕ್ಷರು ತಖ್ ವಿಯ್ಯತುಲ್ ಇಸ್ಲಾಂ ಕಮಿಟಿ ಅಜ್ಜಾವರ ಮೇನಾಲ, ಶ್ರೀ ರಾಘವ ಅಜ್ಜಾವರ ಸಿ.ಎ ಬ್ಯಾಂಕ್ ಸುಳ್ಯ, ಬಹು| ಹನೀಫ್ ಮೌಲವಿ ಇಮಾಮ್ ದರ್ಗಾ ಶರೀಫ್ ಮೇನಾಲ ಅಸೀನಾರಾದರು, ಊರಿನ ಮಹನೀಯರು ಜಾತಿ ಧರ್ಮ ಬೇದವಿಲ್ಲದೇ ಆಗಮಿಸಿದ್ದರು. ಮಿಲಾದ್ ಸಮಿತಿ ಅಜ್ಜಾವರ ಮತ್ತು ಎಂ.ಜೆ.ಎಂ ಅಜ್ಜಾವರ ಮೇನಾಲದ ಸರ್ವ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮವನ್ನು ಜನಾಬ್ ಅಬ್ದುಲ್ಲ್ ಅಝೀಝ್ ಕಾರ್ಯದರ್ಶಿ ಮಿಲಾದ್ ಸಮಿತಿ ಅಜ್ಜಾವರ ಇವರು ಸ್ವಾಗತಿಸಿದರು,ಮುಹಿಯ್ಯದ್ದೀನ್ ಅನ್ಸಾರಿ ಮೇನೆಜರ್ ಝೈನಿಯಾ ವುಮೆನ್ಸ್ ಕಾಲೇಜು ಅಡ್ಕ-ಅಜ್ಜಾವರ ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲರನ್ನು ವಂದಿಸಿದರು.