ಗುತ್ತಿಗಾರು: ಶಿಕ್ಷಣ ಇಲಾಖೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟವು ಸೆ. 20 ಮತ್ತು 21ರಂದು ಗುತ್ತಿಗಾರಿನ ಪಿ.ಎಂ.ಶ್ರೀ ಮಾ.ಹಿ.ಪ್ರಾ ಶಾಲಾ ಮೈದಾನದಲ್ಲಿ ನಡೆಯಲಿದೆ.
ಇದರ ಪೆಂಡಾಲ್, ಅಂಕಣ ತಯಾರಿಗಾಗಿ ಸೆ.17 ರಂದು ಗುದ್ದಲಿ ಪೂಜೆ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ, ಎಸ್.ಡಿ.ಎಂ.ಸಿ.ಯ ಸದಸ್ಯರಾದ ದಿನೇಶ್ ಹಾಲೆಮಜಲು, ಭಾಸ್ಕರ ಎರ್ದಡ್ಕ, ಶಿವಪ್ರಕಾಶ್ ಕಡಪಳ, ಕಬ್ಬಡಿ ಕೋಚ್ ಮಾದವ ಬಿ.ಕೆ, ನಿವೃತ್ತ ದೈ.ಶಿ.ಶಿ ಜಯರಾಮ ಕಡ್ಲಾರು ಮತ್ತಿತರರು ಉಪಸ್ಥಿತರಿದ್ದರು.