ಬಾಳುಗೋಡು, ಸೆ.16: ಬಾಳುಗೋಡಿನ ವಿಶ್ವ ಯುವಕ ಮಂಡಲದ ಆಶ್ರಯದಲ್ಲಿ “ಕಂಡೊಡೊಂಜಿ ದಿನ” ಗೊಬ್ಬು ಕಾರ್ಯಕ್ರಮ ಉದ್ಘಾಟನೆ ಇಂದು ಬಾಳಗೋಡಿನ ಕಿರಿಬಾಗ ಎಂಬಲ್ಲಿ ಉದ್ಘಾಟನೆಗೊಂಡಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಾಡಲದ ಅಧ್ಯಕ್ಷ ರಾಜೇಶ ಕಿರಿಭಾಗ ವಹಿಸಿದ್ದರು. ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕ ದಿನೇಶ್ ಹಾಲೆಮಜಲು ದೀಪ ಬೆಳಗಿಸಿ ಶುಭ ಹಾರೈಸಿದರು.

ಕ್ರೀಡಾಕೂಟವನ್ನು ಸ್ಥಳದಾನಿ ಯೋಗೀಶ್ ಕಿರಿಬಾಗ ಅವರ ಗದ್ದೆಗೆ ಹಾಲು ಸುರಿಯುವ ಮುಖಾಂತರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲಥಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕುಮಾರ ಆಂಗಣ ಉಪಸಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳು ಹಿರಿಯರು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಯುವಕಮಂಡಲ ಸದಸ್ಯರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಯುವಕ ಮಂಡಲ ಕಾರ್ಯದರ್ಶಿ ಅಜೆಯ ಪೊಯ್ಯೆಮಜಲು ಕಾರ್ಯಕ್ರಮ ನಿರೂಪಿಸಿದರು.