ಕಲಾವಿದ ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ

ಸುಳ್ಯ: ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ಇದರ ವತಿಯಿಂದ ಪೆರ್ಲಂಪಾಡಿಯಲ್ಲಿ ಶ್ರೀಗಣೇಶೋತ್ಸವದ ಆಚರಣೆಯಲ್ಲಿ ಜರುಗಿದ ಅದ್ದೂರಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸುಳ್ಯದ ಸಾಹಿತಿ, ಜ್ಯೋತಿಷಿ, ಕಲಾವಿದ ಎಚ್. ಭೀಮರಾವ್ ವಾಷ್ಠರ್ ಇವರ ವಿವಿಧ ಸಾಧನೆಗಳನ್ನು ಪರಿಗಣಿಸಿ 2024ನೇ ಸಾಲಿನ ಕಲಾ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಿ ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ನಡೆದ ಸಂಗೀತ ರಸಮಂಜರಿಯಲ್ಲಿ ಭೀಮರಾವ್ ವಾಷ್ಠರ್ ಸುಳ್ಯ ಅವರು ಅನೇಕ ಗೀತೆಗಳನ್ನು ಹಾಡಿ ಮನರಂಜಿಸಿದ್ದಾರೆ.

ವೇದಿಕೆಯಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ಇದರ ಸಂಚಾಲಕ ರವಿ ಪಾಂಬಾರ್, ಅಧ್ಯಕ್ಷ ಶ್ರೀಧರ್ ಎಕ್ಕಡ್ಕ, ಗಾಯಕಿ ನಿಕ್ಷಿತಾ ಅಮ್ಚಿನಡ್ಕ ಹಾಗೂ ಗಣೇಶ ಮಹೋತ್ಸವದ ಹಿರಿಯರು, ಖ್ಯಾತ ಗಾಯಕರು, ಗಣೇಶ್ ಮಹೋತ್ಸವದ ಪದಾಧಿಕಾರಿಗಳು ಉಪಸ್ಥಿತರಿದ್ದರು.