ಸುಳ್ಯ: ಸಾಂಪ್ರದಾಯಿಕವಾಗಿ ನಡೆದ ಗಣೇಶ ವಿಸರ್ಜನೆ| ಭಜನೆ, ತಾಳ ಮೇಳಕ್ಕೆ ಹೆಜ್ಜೆ ಹಾಕಿದ ಭಕ್ತಗಣ

ಸುಳ್ಯ: ಇಲ್ಲಿನ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಸುಳ್ಯ ಮತ್ತು ಸಾರ್ವಜನಿಕ ಶ್ರೀ ದೇವತಾರಾದನಾ ಸಮಿತಿ ವತಿಯಿಂದ 56ನೇ ವರ್ಷದ ಗಣೇಶೋತ್ಸವದ ಗಣೇಶನ ವಿಸರ್ಜನೆಯ ಮೆರವಣಿಗೆಯು ಸೆ.11 ರಂದು ನಡೆಯಿತು.

ಅಪರಾಹ್ನ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು ವಾದ್ಯ ಘೋಷಗಳೊಂದಿಗೆ, ಗೊಂಬೆ ಬಳಗ, ಆಕರ್ಷಕ ಕುಣಿತ ಭಜನೆಯೊಂದಿಗೆ ಸುಳ್ಯದ ಮುಖ್ಯ ರಸ್ತೆಯಲ್ಲಿ ಯಾವುದೇ ಡಿಜೆ ಅಬ್ಬರವಿಲ್ಲದೆ ಶಾಂತ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಶೋಭಾಯಾತ್ರೆ ನಡೆಯಿತು.

ನಂತರ ಮೆರವಣಿಗೆಯು ನಗರದ ರಸ್ತೆಗಳಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಗಣೇಶನ ವಿಗ್ರಹ ಜಲಸ್ತಂಭನಗೊಳಿಸಲಾಯಿತು. ನೂರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಳಕಿತರಾದರು.