ಆಲೆಟ್ಟಿ: ಕಾಡಾನೆಗಳ‌ ಹಾವಳಿಗೆ ಕೃಷಿ ನಾಶ

ಆಲೆಟ್ಟಿ: ಇಲ್ಲಿನ ತುದಿಯಡ್ಕ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಭಾಗದ ಕೃಷಿಕರ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ.

ಗ್ರಾಮದ ಕೃಪಾಶಂಕರ ತುದಿಯಡ್ಕ, ಕುಮಾರಸ್ವಾಮಿ ಬಿಸಿಲುಮಲೆ, ಕಳಗಿ ರಾಮಯ್ಯ ಹಾಗೂ ಲೋಲಜಾಕ್ಷರವರ ತೋಟಕ್ಕೆ ಮಂಗಳವಾರ ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಧಾಳಿ ಮಾಡಿದ್ದು ಸಿಕ್ಕ ವಸ್ತುಗಳನ್ನು ಪುಡಿಮಾಡಿರುವುದಲ್ಲದೆ ಅಡಿಕೆ,ತೆಂಗು,ಬಾಳೆಗಿಡಗಳನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ‌ ಇಲಾಖೆ ಅಧಿಕಾರಿಗಳು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ.