ಪಂಜ: ಶ್ರೀ ಪರಿವಾರ ಪಂಲಿಂಗೇಶ್ವರ ದೇಗುಲಕ್ಕೆ ನಳಿನ್ ಕುಮಾರ್ ಕಟೀಲ್ ಮತ್ತು ಆರ್. ಕೆ. ನಾಯರ್ ಭೇಟಿ ನೀಡಿದರು. ಅವರನ್ನು ಡಾ. ದೇವಿಪ್ರಸಾದ್ ಕಾನತ್ತೂರು ಸ್ವಾಗತಿಸಿದರು.
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇವರು ಶ್ರೀ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯ ಸಂತೋಷ್ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ, ಪುಷ್ಪ ಪ್ರಸಾದ್ ಉಪಸ್ಥಿತರಿದ್ದರು.