ನೂತನ ಸಬ್ ಇನ್ಸ್ಪೆಕ್ಟರ್ ಸಂತೋಷ್‌ರವರನ್ನು ಎಸ್‌ಡಿಪಿಐ ಸುಳ್ಯ ನಿಯೋಗದಿಂದ ಸ್ವಾಗತ

ಸುಳ್ಯ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ನೂತನವಾಗಿ ಅಧಿಕಾರವಹಿಸಿಕೊಂಡಂತಹ ಸಬ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ರವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ, ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷ ಮಿರಾಝ್ ಸುಳ್ಯ , ಬ್ಲಾಕ್ ಸಮಿತಿಯ ಕಾರ್ಯದರ್ಶಿ ಸುಹೈಲ್ ಸುಳ್ಯ , ಉಪಾಧ್ಯಕ್ಷ ಸಲೀಂ ಗೂನಡ್ಕ, ಪದಾಧಿಕಾರಿಗಳಾದ ಸಿದ್ದೀಕ್ ಕೊಡಿಯಮ್ಮೆ ಹಾಗೂ ಸಿದ್ದೀಕ್ ಸಿ.ಎ.  ಉಪಸ್ಥಿತರಿದ್ದರು.