ಹರಿಹರ ಪಲ್ಲತಡ್ಕ: ಬಾಳುಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹರಿಹರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಮಕಾರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗದಲ್ಲಿ ಪ್ರಥಮ, ಹಿರಿಯ ವಿಭಾಗದಲ್ಲಿ ದ್ವಿತೀಯ ಹಾಗೂ ಕಿರಿಯ ಮತ್ತು ಹಿರಿಯ ವಿಭಾಗದ ಸಮಗ್ರ ಪ್ರಶಸ್ತಿ ಲಭಿಸಿದೆ.
ಕಿರಿಯರ ವಿಭಾಗದಲ್ಲಿ ಛದ್ಮವೇಷದಲ್ಲಿ ಹಂಸಿಕಾ, ಅಭಿನಯ ಗೀತೆಯಲ್ಲಿ ರಕ್ಷಿತಾ ಎ.ಯು., ಕ್ಲೇ ಮಾಡಲಿಂಗ್‌ನಲ್ಲಿ ಲಕ್ಷಿತಾ ಪ್ರಥಮ, ಭಕ್ತಿಗೀತೆಯಲ್ಲಿ ನಿಖಿತಾ ಡಿ. ತೃತೀಯ, ಧಾರ್ಮಿಕ ಪಠಣದಲ್ಲಿ ಸಂಸ್ಕೃತ ಆರಾಧ್ಯ ಕೆ. ಪ್ರಥಮ, ಚಿತ್ರಕಲೆಯಲ್ಲಿ ಯಶಿಕ ಎಂ.ಕೆ. ತೃತೀಯ, ಆಶುಭಾಷಣದಲ್ಲಿ ಯಶಸ್ ಪಿ.ವೈ. ದ್ವಿತೀಯ ಹಾಗೂ ಕನ್ನಡ ಕಂಠ ಪಾಠದಲ್ಲಿ ಚಿತ್ರಾಕ್ಷಿ ಕೆ.ಡಿ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯರ ವಿಭಾಗದ ಧಾರ್ಮಿಕ ಪಠಣ ಸಂಸ್ಕೃತ ಮತ್ತು ಕವನ ವಾಚನದಲ್ಲಿ ಕ್ಷಮಾ ಡಿ ಪ್ರಥಮ ಹಾಗೂ ದ್ವಿತೀಯ, ಚಿತ್ರಕಲೆಯಲ್ಲಿ ನಿಶಾ ಎಂಪಿ ದ್ವಿತೀಯ, ಅಭಿನಯ ಗೀತೆ ಮತ್ತು ದೇಶಭಕ್ತಿಗೀತೆಯಲ್ಲಿ ಅನ್ವಿತ ಕೆ.ಎಸ್ ಪ್ರಥಮ ಮತ್ತು ದ್ವಿತೀಯ, ಭಕ್ತಿಗೀತೆಯಲ್ಲಿ ಕೀರ್ತಿ ಪ್ರಥಮ, ಮಿಮಿಕ್ರಿಯಲ್ಲಿ ಚಂಪಕ್ ಕೆ.ಎಂ ಪ್ರಥಮ, ಪ್ರಬಂಧ ರಚನೆಯಲ್ಲಿ ಆರಾಧ್ಯ ಕೆ.ಎಸ್ ತೃತೀಯ , ಹಿಂದಿ ಕಂಠಪಾಠದಲ್ಲಿ ದಿವೀಶ್ ಗೌಡ ಜೆ.ಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.