ಕೊಲ್ಲಮೊಗ್ರು ಮೂಲದ ಯುವತಿ ಬೆಂಗಳೂರಿನಿಂದ ನಾಪತ್ತೆ| ವಿದೇಶಕ್ಕೆ ತೆರಳಲು ಹೊರಟಾಕೆ ಪ್ರಿಯತಮನ ಜೊತೆ ಪತ್ತೆ!?

ಕೊಲ್ಲಮೊಗ್ರ: ಗ್ರಾಮದ ಯುವತಿಯೊಬ್ಬಳು ವಿದೇಶಕ್ಕೆ ತೆರಳುವ ಉದ್ದೇಶದಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ತೆರಳಿದ್ದು, ಅಲ್ಲಿಂದ ವಿದೇಶಕ್ಕೆ ತೆರಳದೇ ನಾಪತ್ತೆಯಾಗಿರುವುದಾಗಿ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ವಿದೇಶದಲ್ಲಿ ಕೆಲಸ ದೊರೆತಿದ್ದು, ವಿದೇಶಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯವರಲ್ಲಿ ತಿಳಿಸಿ ಯುವತಿ ತೆರಳಿರುವುದಾಗಿ ತಿಳಿದು ಬಂದಿದೆ. ಬಳಿಕ ಮನೆಯವರ ಸಂಪರ್ಕಕ್ಕೂ ಲಭ್ಯವಾಗದ ಹಿನ್ನೆಲೆಯಲ್ಲಿ ಆಕೆಯ ಮನೆಯವರು ದೂರು ದಾಖಲಿಸಿದ್ದಾರೆ.

ಆಕೆ ವಿದೇಶಕ್ಕೆ ತೆರಳದೇ ತನ್ನ ಪ್ರಿಯತಮನ ಜೊತೆಗೆ ಪರಾರಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತಂತೆ ತನಿಖೆ ನಡೆಸಿದಾಗ ಜೋಡಿ ಬೆಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ ಹೇಳಲಾಗಿದೆ. ಸದ್ಯ ಯುವತಿ ಮತ್ತು ಅನ್ಯಕೋಮಿನ ಯುವಕನನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ.