ಗುತ್ತಿಗಾರು: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.7 ಮತ್ತು 8ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ.
ಸೆ. 07ರಂದು ಬೆಳಗ್ಗೆ ಗಂಟೆ 9-00ಕ್ಕೆ ಗಣಪತಿ ಪ್ರತಿಷ್ಠೆ, 9-15ರಿಂದ ಸಾಮೂಹಿಕ ಗಣಪತಿ ಹವನ, ಗಂಟೆ 10- 00ರಿಂದ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಬಳಿಕ ಸಂಜೆ ಗಂಟೆ 6-00ರಿಂದ 7-00ರ ತನಕ ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 7-00ರಿಂದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು, ರಾತ್ರಿ ಗಂಟೆ 8- 30ರಿಂದ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕ ಶಿವಪ್ರಸಾದ ಮಲೆಬೆಟ್ಟು ಅವರು ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ. ರಾತ್ರಿ 9.30 ರಿಂದ ನೃತ್ಯ ಸಾರಂಗ ಕಲಾಕುಟೀರ ವಳಲಂಬೆ ಗುತ್ತಿಗಾರು ನೃತ್ಯಗುರು ರಚಿತಾ ಗೌಡ ಇಜೇಲುಮಕ್ಕಿ ತಂಡದಿಂದ “ಸಾಂಸ್ಕೃತಿಕ ನೃತ್ಯ ವೈಭವ” ಪ್ರದರ್ಶನಗೊಳ್ಳಲಿದೆ.
.07 ರಂದು ಸಾರ್ವಜನಿಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಪುರುಷರಿಗೆ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ ಒಂದು ನಿಮಿಷದ ಸ್ಪರ್ಧೆ ನಡೆಯಲಿದೆ. ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ರೂ. 4001,ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ರೂ. 4001, ದ್ವಿತೀಯ ರೂ. 3001, ಸೆಮಿಫೈನಲ್ನಲ್ಲಿ ನಿರ್ಗಮಿಸಿದ ತಂಡಗಳಿಗೆ ತಲಾ ರೂ.1000/- ಮತ್ತು ಶಾಶ್ವತ ಫಲಕ ಬಹುಮಾನ ನೀಡಲಾಗುವುದು.
ಸೆ.07 ರಂದು ಸಾರ್ವಜನಿಕ ಮಹಿಳೆಯರಿಗೆ ಭಕ್ತಿಗೀತೆ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ (ಮಹಿಳೆಯರ ಹಗ್ಗ ಜಗ್ಗಾಟಕ್ಕೆ ಸ್ಥಳದಲ್ಲೇ ತಂಡ ರಚನೆ ಮಾಡುವುದು) ಸ್ಪರ್ಧೆ ನಡೆಯಲಿದೆ. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಭಕ್ತಿಗೀತೆ, ಗಣೇಶನ ಚಿತ್ರ ಬಿಡಿಸುವುದು ಹಾಗೂ ಲಕ್ಕಿಗೇಮ್ ಸ್ಪರ್ಧೆ ನಡೆಯಲಿದೆ. ಅಂಗನವಾಡಿ, ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ ಹಾಗೂ ಇತರ ಸ್ಪರ್ಧೆ ಹಾಗೂ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಿವಿಧ ಸ್ಪರ್ಧೆ ನಡೆಯಲಿದೆ.
ಸೆ. 08ರಂದು ಬೆಳಗ್ಗೆ ಗಂಟೆ 8-30ರಿಂದ ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ, ಶ್ರೀಕೃಷ್ಣ ಭಜನಾ ಮಂಡಳಿ ಗುತ್ತಿಗಾರು, ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು, ಶ್ರೀ ದೇವಿ ಭಜನಾ ಮಂಡಳಿ ಮೆಟ್ಟಿನಡ್ಕ, ಸ್ಪೂರ್ತಿ ಜ್ಞಾನವಿಕಾಸ ಭಜನಾ ಮಂಡಳಿ ಮೊಗ್ರ ಹಾಗೂ ಶ್ರೀ ದುರ್ಗಾಶಕ್ತಿ ಮಹಿಳಾ ಭಜನಾ ಮಂಡಳಿ, ಹಾಲೆಮಜಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸೆ. 08 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10- 00ರಿಂದ ಪುರುಷರ ಮುಕ್ತ ಹಗ್ಗಜಗ್ಗಾಟ ನಡೆಯಲಿದ್ದು ಪ್ರಥಮ ರೂ. 2001, ದ್ವಿತೀಯ ರೂ. 1001 ಮತ್ತು ಶಾಶ್ವತ ಫಲಕ ನೀಡಲಾಗುವುದು ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಮಧ್ಯಾಹ್ನ ಗಂಟೆ 12- 00ರಿಂದ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಸೆ.08 ರಂದು ಸಂಜೆ ಗಂಟೆ 3.00 ರಿಂದ ಶ್ರೀ ಗಣೇಶನ ಭವ್ಯ ಶೋಭಾಯಾತ್ರೆ ನಡೆಯಲಿದೆ.