ಸುಳ್ಯ: ಗಾಂಧಿನಗರದಲ್ಲಿ ರೂಂ ನಲ್ಲಿ ಯುವಕರು ಮಲಗಿದ್ದ ಸಂದರ್ಭದಲ್ಲಿ ಅನ್ಯಧರ್ಮದ ಯುವಕರು ಬಂದು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೋಲೀಸ್ ದೂರು ನೀಡಿದ ಘಟನೆ ಆ.25 ರಂದು ನಡೆದಿದೆ.
ಈ ಬಗ್ಗೆ ಆರೋಪಿಸಿ ರಕ್ಷಿತ್, ನವನೀತ್, ಸಂತೋಷ್, ಸಂಜೀವ ಎಂಬವರು ರೂಮ್ ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಬಳಿ ಬಂದ ಅಪರಿಚಿತ ಯುವಕರು ತಮ್ಮ ದ್ವಿಚಕ್ರ ವಾಹನದಲ್ಲಿ ಕರ್ಕಶವಾದ ಶಬ್ದ ಮಾಡುತ್ತ, ಬೊಬ್ಬೆ ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ. ಅವರಿಗೆ ಸೌಂಡ್ ಮಾಡಬೇಡಿ ಎಲ್ಲರೂ ನಿದ್ದೆ ಮಾಡಿದ್ದಾರೆ ಎಂದು ಕೇಳಿಕೊಂಡಾಗ ನಿಮ್ಮ ರೂಮ್ ನ ಒಳಗಡೆ ಬಂದು ಶಬ್ದ ಮಾಡಿದ್ದೇವಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ಸಮಯದಲ್ಲಿ ಅಪರಿಚಿತ 35 ರಿಂದ 40 ಯುವಕರ ಗುಂಪು ಸೇರಿಸಿಕೊಂಡು ರೂಮ್ ನ ಒಳಗಡೆ ಬಂದು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯುವಕರು ಫೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಬಂದ ಬಳಿಕ ಚದುರಿದ ಯುವಕರು ಮತ್ತೆ ಮಧ್ಯರಾತ್ರಿ ಮತ್ತೆ ಅದೇ ರಸ್ತೆಯಾಗಿ ಅಪರಿಚಿತ ಯುವಕರ ವಾಹನವು ಓಡಾಡುವುದನ್ನು ಗಮನಿಸಿದ್ದ ಯುವಕರು ಬಜರಂಗದಳದ ಪ್ರಮುಖರಿಗೆ ಹಾಗೂ ಪೋಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಮತ್ತೆ ಪೊಲೀಸರು ಹಾಗೂ ಬಜರಂಗದಳದ ಕಾರ್ಯಕರ್ತರು ಜಮಾಯಿಸಿದರು. ನಂತರ ರೂಂ ನಲ್ಲಿದ್ದ ಯುವಕರು ಸುಳ್ಯ ಠಾಣೆಗೆ ಬಂದು ಕೇಸು ನೀಡಿದರು. ಗಾಯಗೊಂಡ ಸಂಜೀವ ಎಂಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.