ಆಲೆಟ್ಟಿ: ಸೇತುವೆಯಿಂದ ಉರುಳಿದ ರಿಕ್ಷಾ| ಚಾಲಕ ಪ್ರಾಣಾಪಾಯದಿಂದ ಬಚಾವ್

ಆಲೆಟ್ಟಿ: ಇಲ್ಲಿನ ಕುಕ್ಕುಂಬಳ ಸೇತುವೆಯಿಂದ ಕೆಳಗಡೆ ಆಟೋ ರಿಕ್ಷಾವೊಂದು ಬಿದ್ದು, ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಟೋ ಚಾಲಕ ವೇಣುಗೋಪಾಲ ದೇವಮೂಲೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯಾಗಿದ್ದಾರೆ. ಅವರು ದೇವಮೂಲೆಗೆ ಪ್ರಯಾಣಿಕರನ್ನು ಬಿಟ್ಟು ಪೆರಾಜೆ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಆಟೋ ರಿಕ್ಷಾ ಜಖಂಗೊಂಡಿದ್ದು, ಮೇಲಕ್ಕೆ ಎತ್ತುವ ಪ್ರಯತ್ನ ನಡೆಯುತ್ತಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ.