ಐವರ್ನಾಡು: ಪಂಚಶ್ರೀ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಸೆಲ್ಸ್ ಮತ್ತು ಸರ್ವೀಸ್ ಸೆಂಟರ್ ಜನಾರ್ಧನ್ ಗೌಡ ಗುತ್ತಿಗಾರುಮೂಲೆ ಅವರ ಮಲಕತ್ವದಲ್ಲಿ ಆ. 23 ರಂದು ಐವರ್ನಾಡು ಗ್ರಾಮ ಪಂಚಾಯತ್ ಬಿಲ್ಡಿಂಗ್ ನಾಲ್ಲಿ ಶುಭಾರಂಭಗೊಂಡಿತು. ಪುರೋಹಿತ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ನಿವೃತ್ತ ಯೋಧ ಹಾಗೂ ಮಡ್ತಿಲ ಮನೆತನದ ಹಿರಿಯರಾದ ವೀರಪ್ಪ ಗೌಡ ಕೊಯಿಲ ಮಡ್ತಿಲರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜನಾರ್ಧನ ಗೌಡ ಗುತ್ತಿಗಾರುಮೂಲೆ, ಭಾರತಿ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಪಿಡಿಒ ಶ್ಯಾಮ್ ಪ್ರಸಾದ್, ಚಂದ್ರಹಾಸ ಗುತ್ತಿಗಾರುಮೂಲೆ, ರವೀಂದ್ರ ಮಡ್ತಿಲ,ಅರುಣ್ ಗುತ್ತಿಗಾರುಮೂಲೆ, ಅಜಿತ್ ಗುತ್ತಿಗಾರುಮೂಲೆ, ರಕ್ಷಿತ್ ಸಾರಕೂಟೇಲು, ಲೀಲಾವತಿ ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ತರಹದ ವಿದ್ಯುತ್ ಉಪಕರಣಗಳ ರಿಪೇರಿ ಹಾಗೂ ಬಿಡಿಬಾಗಗಳು ದೊರೆಯುತ್ತದೆ. ಮಿಕ್ಸಿ ಹಾಗೂ ಗ್ಯಾಸ್ ಸ್ಟವ್ ಗಳನ್ನು ರಿಪೇರಿ ಮಾಡಿ ಕೊಡಲಾಗುವುದು, ಎಲ್ಲಾ ತರಹದ ವೈರಿಂಗ್ ಕೆಲಸ ಮಾಡಿ ಕೊಡಲಾಗುವುದು, ಪೈಪ್, ಪಿಟ್ಟಿಂಗ್ಸ್ ಗಳು ದೊರೆಯುತ್ತದೆ, ತೋಟಗಳಿಗೆ ಡ್ರಿಪ್ ಮತ್ತು ಸ್ಪಿಂಕ್ಲರ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮಾಲಕರು ಹೇಳಿದ್ದಾರೆ.