ಹರಿಹರ; ಆ. 16:ಶ್ರೀ ಹರಿಹರೇಶ್ವರ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಇವುಗಳ ಸಹಬಾಗಿತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಆ. 16ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.
ದೇವಸ್ಥಾನದ ಪ್ರದಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ಕಾರ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ವರಮಹಾಲಕ್ಷ್ಮೀ ಸಮಿತಿಯ ಸ್ಥಾಪಕಧ್ಯಕ್ಷ ತಾರ ಮಲ್ಲಾರ, ಗೌರವಾಧ್ಯಕ್ಷ ಸಾಯಿಗೀತಾ ಕೂಜುಗೋಡು, ಅಧ್ಯಕ್ಷೆ ಹರ್ಷಿಣಿ ಶಿಶಿರ್ ಕಟ್ಟೆಮನೆ, ಹಾಗು ಸರ್ವ ಸದಸ್ಯರು, ಊರ ಪರವೂರ ಭಕ್ತಾದಿಗಳು ಭಾಗಿಯಾದರು.