ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿಯ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ

ಸುಳ್ಯ: ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆಯು ಆ.14 ರಂದು ಸುಳ್ಯದಲ್ಲಿ ನಡೆಯಿತು.

ಬೃಹತ್ ಪಂಜಿನ ಮೆರವಣಿಗೆಯು ಶಾಸ್ತ್ರೀ ವೃತ್ತದಿಂದ ಪ್ರಾರಂಭಗೊಂಡು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಪ್ರದೀಪ್ ಸರಿಪಳ್ಳ ಮಾತನಾಡಿದರು.

ವೇದಿಕೆಯಲ್ಲಿ ಭಜರಂಗದಳ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಮುಖ್ಯ ಅತಿಥಿ ನಿವೃತ್ತ ಯೋಧ ಬಿ.ಎಸ್.ಎಫ್ ಎಂ.ಬಿ. ಬಾಲಕೃಷ್ಣ, ಬಜರಂಗದಳ ಜಿಲ್ಲಾ ಸಾಪ್ತಹಿಕ ಮಿಲನ್ ರೂಪೇಶ್ ಪೂಜಾರಿಮನೆ, ಭಜರಂಗದಳ ಪ್ರಖಂಡ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಭಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಬಜರಂಗದಳ ಸುಳ್ಯನಗರ ಅಧ್ಯಕ್ಷ ಉಪೇಂದ್ರ ಕಾಮತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿಯ ಪ್ರಖಂಡ ಸಂಯೋಜಕಿ ರೀನಾ ಚೋಡಿಪಣೆ, ಮಾತೃ ಶಕ್ತಿ ಸುಳ್ಯ ನಗರ ಸಂಯೋಜಕಿ ಲತಾ ರೈ ಬೂಡು, ದುರ್ಗವಾಹಿನಿ ಸುಳ್ಯ ನಗರ ಸಂಯೋಜಿಕಿ ಪ್ರೀತಿಕಾ ಚೆಮ್ನೂರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.