ಸುಳ್ಯ: ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದ‌ ವೆಹಿಕಲ್‌ ಎಲೆಕ್ಟ್ರಿಷಿಯನ್ ಸತ್ಯಣ್ಣ ಇನ್ನಿಲ್ಲ

ಸಮಗ್ರ ನ್ಯೂಸ್: ಸುಳ್ಯದ ಹಳೆಗೇಟಿನಲ್ಲಿ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೆಹಿಕಲ್‌ ಎಲಕ್ಟ್ರಿಷಿಯನ್ ಸತ್ಯ ನಿಧನರಾಗಿದ್ದಾರೆ.

ದಿನಗಳ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಅವರು ಹಲವು ವರ್ಷಗಳಿಂದ ಸುಳ್ಯದಲ್ಲಿ ವಾಹನಗಳ ಎಲಕ್ಟ್ರಿಷಿಯನ್ ಆಗಿ ಕೆಲಸ ನಿರ್ವಹಿಸಿ, ಶ್ರೀ ಲಕ್ಷ್ಮೀ ಅಟೋ ಇಲೆಕ್ಟಿಕಲ್ ವರ್ಕ್ ಮಾಲಕರಾಗಿ ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.