ಎಡಮಂಗಲ ಸಂಪರ್ಕ ರಸ್ತೆ ಮಾಲೆಂಗಿರಿ ಸೇತುವೆ ಬದಿ ಮಣ್ಣು ಕುಸಿತ|ಸಂಪರ್ಕ ಕಡಿತಗೊಳ್ಳುವ ಆತಂಕ

ಎಡಮಂಗಲ: ಸಂಪರ್ಕ ರಸ್ತೆ ಮಾಲೆಂಗಿರಿ ಸೇತುವೆ ಬದಿ ಮಣ್ಣು ಕುಸಿದು ಬಿದ್ದಿದ್ದು ಅಪಾಯದಲ್ಲಿದೆ. ಇನ್ನಷ್ಟು ಮಣ್ಣು ಕುಸಿದ್ದು ಬಿದ್ದರೆ ಎಡಮಂಗಲ ಸಂಪರ್ಕ ಕಡಿತಗೊಳ್ಳುವ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ.

ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸೇತುವೆ ಹಾನಿಯಾದರೆ ಸಮಸ್ಯೆ ಎದುರಾಗಲಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕಾಗಿ ಸಾರ್ವಜನಿಕರು ತಿಳಿಸಿದ್ದಾರೆ.