ಡಾ. ಕುರುಂಜಿ ವೆಂಕಟ್ರಮಣ ಗೌಡರ ೧೧ನೇ ಪುಣ್ಯತಿಥಿ

ಸುಳ್ಯ: ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಎಂದೇ ಪ್ರಸಿದ್ದರಾಗಿರುವ ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಕುರುಂಜಿ ವೆಂಕಟ್ರಮಣ ಗೌಡರ ೧೧ ನೇ ಪುಣ್ಯತಿಥಿಯ ಪ್ರಯುಕ್ತ ಆ.೭ರಂದು ಗಾಂಧಿ ಚಿಂತನ ವೇದಿಕೆ ವತಿಯಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕುರುಂಜಿ ಪುತ್ಥಳಿಗೆ ಮಾಲಾರ್ಪಣಾ ಮಾಡಿ ಗೌರವ ಸಲ್ಲಿಸಲಾಯಿತು.

ಈ ವೇಳೆ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ, ಸುಳ್ಯ ತಾಲೂಕು ಜರ್ನಲಿಸ್ಟ್ ಯೂನಿಯನ್ ಸಂಘದ ಅಧ್ಯಕ್ಷ ಈಶ್ವರ ವಾರಣಾಸಿ, ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ನ್ಯಾಯವಾದಿ ದಿನೇಶ್ ಅಂಬೆಕಲ್ಲು ಹಾಗೂ ಸಾರ್ವಜನಿಕರು ಇದ್ದರು.