ಸುಳ್ಯ: ಇಲ್ಲಿನ ಕಂದಾಯ ನಿರೀಕ್ಷಕರ ಕಚೇರಿ ಮುಂಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ತೀರಾ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ಶಾಲಾ ಸಮಯದಲ್ಲಿ ವಾಹನಗಳು ರಸ್ತೆ ಬಿಟ್ಟುಕೊಡಲು ಸಮಸ್ಯೆಯಾಗುತ್ತಿದ್ದು ಆಗಾಗ್ಗೆ ಈ ಗುಂಡಿಯಲ್ಲಿ ವಾಹನಗಳು ಹೂತುಹೋಗುತ್ತಿರುವುದು ಸಾಮಾನ್ಯ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಗುಂಡಿಗೊಂದು ಗತಿ ಕಾಣಿಸದೇ ಹೋದಲ್ಲಿ ಮುಂದಾಗುವ ಅಪಾಯಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ. ಸಾರ್ವಜನಿಕರ ಜೀವದ ಮೇಲೆ ಚೆಲ್ಲಾಟವಾಡುವ ಬದಲು ಸ್ವಲ್ಪ ಕಾಳಜಿ ವಹಿಸುವುದು ಒಳ್ಳೆಯದಲ್ಲವೇ…