ಅಜ್ಜಾವರ: SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯ ನಿರ್ದೇಶನದಂತೆ SKSSF ಅಜ್ಜಾವರ ಕ್ಲಸ್ಟರ್ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನಸಂಚಲನ ಕಾರ್ಯಕ್ರಮ ಆ. 01ರಂದು ಅಜ್ಜಾವರದ ವಿಶಾಖ ಕ್ಲಿನಿಕ್ ಸಮೀಪ ನಡೆಯಿತು.
ಕ್ಲಸ್ಟರ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಕೆ ಎಂ ರವರ ಅಧ್ಯಕ್ಷತೆ ವಹಿಸಿದ್ದರು. ಝೈನಿಯ್ಯ ಎಜ್ಯುಕೇಶನ್ ಫಾರ್ ಮೋರಲ್ ಸೈನ್ಸ್ ಇದರ ಚೇರ್ಮನ್ ಅನ್ವರ್ ಅಲಿ ದಾರಿಮಿಯವರು ದುಹ ನೆರವೇರಿಸಿದರು. ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಹನೀಫಿ ಯವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. SYS ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಶಾಫಿ ದಾರಿಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಹಿಯದ್ದೀನ್ ಜುಮಾ ಮಸೀದಿ ಮಾರ್ಗ ಮಂಡೆಕೋಲು ಕತೀಬ್ ಮುಹಮ್ಮದ್ ಶಮೀಮ್ ಅರ್ಶದಿಯವರು ಅಶಂಸ ಭಾಷಣ ಮಾಡಿದರು. ಮುಖ್ಯ ಭಾಷಣಗಾರ ಯಾಸರ್ ಅರಾಫತ್ ಕೌಸರಿಯವರು (ಸಂಘಟನಾ ಕಾರ್ಯದರ್ಶಿ SKSSF ದ ಕ ಈಸ್ಟ್) ಮಾತನಾಡಿ, ಮಾದಕ ವ್ಯಸನವು ಜಾತಿ ಮತ ಧರ್ಮ ಮತ್ತು ವಯಸ್ಸಿನ ಯಾವುದೇ ಭೇದವಿಲ್ಲದೆ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಒಂದು ಪಿಡುಗಾಗಿದೆ. ಇದನ್ನು ತಡೆಯಲು ನಾವೆಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದರು.
ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರು ಅಜ್ಜಾವರ ವಿಶಾಖ ಕ್ಲಿನಿಕಿನ ಡಾ॥ ಅವಿನಾಶ್ ರವರು ಮಾತನಾಡಿ, SKSSF ನಡೆಸಿಕೊಂಡು ಬರುತ್ತಿರುವಂತಹ ಈ ಜಾಗೃತಿ ಅಭಿಯಾನವು ಎಲ್ಲಾ ಕಡೆಗಳಿಗೂ ವ್ಯಾಪಿಸಿ ಮಾದಕ ವ್ಯಸನ ಎಂಬ ಪಿಡುಗನ್ನು ತಡೆಗಟ್ಟಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಖೆಗಳ ಪ್ರತಿನಿಧಿಗಳು ಮತ್ತು ಜಮಾಹತ್ ಕಮೀಟಿ ಪ್ರತಿನಿಧಿಗಳು SKSSF ಸುಳ್ಯ ವಲಯ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು.
SKSSF ಅಜ್ಜಾವರ ಶಾಖ ಅಧ್ಯಕ್ಷರಾದ ರಜಾಕ್ ಮುಸ್ಲಿಯಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೇರಳದ ವಯನಾಡಿನಲ್ಲಿ ನಡೆದ ಭೀಕರ ದುರಂತಕ್ಕೆ ಸಂತಾಪವನ್ನು ಸೂಚಿಸಿ , ದುರಂತದಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡವರಿಗೆ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.