ಕಲ್ಲುಗುಂಡಿ: ಭಾರೀ ಮಳೆಗೆ ಮನೆ ಗೋಡೆ‌‌‌ ಕುಸಿತ

ಕಲ್ಲುಗುಂಡಿ: ಭಾರೀ ಮಳೆ ಸುರಿದ ಪರಿಣಾಮ ಮನೆಯ ಹಿಂಬದಿಯ ಗೋಡೆ ಕುಸಿತಗೊಂಡು ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಕಲ್ಲುಗುಂಡಿಯ ದಂಡಕಜೆ ಎಂಬಲ್ಲಿ ನಡೆದಿದೆ.

ಕಲ್ಲುಗುಂಡಿ ದಂಡಕಜೆಯ ಮಧುಸೂದನ ಎಂಬವರ ಮನೆಯ ಹಿಂಬದಿಯಲ್ಲಿ ಗೋಡೆ ಕುಸಿತಗೊಂಡಿದ್ದು, ಅಡುಗೆ ಕೋಣೆಗೆ ಸಂಪೂರ್ಣ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.