ಸುಳ್ಯ: ಬಸ್ – ಸ್ಕೂಟಿ ನಡುವೆ ಅಪಘಾತ| ಗ್ರಾ.ಪಂ ಸದಸ್ಯ ದುರ್ಮರಣ

ಸಮಗ್ರ ನ್ಯೂಸ್: ಸ್ಕೂಟಿ ಹಾಗೂ ಬಸ್ ಪರಸ್ಪರ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಸುಳ್ಯ ತಾಲೂಕಿನ ನೆ.ಕೆಮ್ರಾಜೆ ಗ್ರಾ.ಪಂ. ಸದಸ್ಯ ಹಾಗೂ ಪಿಗ್ಮಿ ಸಂಗ್ರಾಹಕರಾಗಿರುವ ರಾಮಚಂದ್ರ ಪ್ರಭು ಅವರು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಜಾಲ್ಸೂರು – ಸುಬ್ರಹ್ಮಣ್ಯ ರಾ.ಹೆದ್ದಾರಿಯ ಸೋಣಂಗೇರಿಯ ಸುತ್ತುಕೋಟೆ ಬಳಿ ಸಂಭವಿಸಿದೆ.

ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸುತ್ತುಕೋಟೆ ಬಳಿ ಡಿಕ್ಕಿ ಹೊಡೆದಿದ್ದು, ರಾಮಚಂದ್ರ ಪ್ರಭುರವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.

Leave a Comment