ಸುಳ್ಯ: ಕಳಪೆ ಗುಣಮಟ್ಟದ ಕಾಮಗಾರಿಯಿಂದ ಕುಸಿದ ಮೋರಿ

ಸಮಗ್ರ ನ್ಯೂಸ್: ಈ ಬಾರಿಯ ಮಳೆಗೆ ಕೆಮನಬಳ್ಳಿಯ ಹೊಸ ಮೋರಿ ಕುಸಿದು ಹೋಗಿದ್ದು, ಒಂದೂವರೆ ವರ್ಷದ ಹಿಂದೆ ಈ ಮೋರಿಯನ್ನು ಕಳಪೆ ಗುಣಮಟ್ಟದ ಕಾಮಗಾರಿಯಾಗಿ ಮಾಡಿದ್ದು ಇದೀಗ ರಸ್ತೆಯನ್ನು ನಂಬಿದಂತಹ ಐದು ಮನೆಗಳಿಗೆ ಸಂಕಷ್ಟ ಎದುರಾಗಿದೆ.

ಯಾವುದೇ ರೀತಿಯ ವಾಹನದಲ್ಲಿ ಸಂಚಾರ ಮಾಡಲು ಜೀವ ಕೈಯಲ್ಲಿಟ್ಟುಕೊಂಡು ಹೋಗುವಂತಾಗಿದೆ. ಅದೇ ರಸ್ತೆಯ ಇನ್ನೊಂದು ಭಾಗದಲ್ಲಿರುವ ದೊಡ್ಡ ಕಾಲು ಸೇತುವೆಯ ಅಪಾಯ ಮಟ್ಟದಲ್ಲಿದೆ.ಇದೀಗ ಅದರ ಒಂದು ಬದಿ ಕುಸಿದು ಬಿದ್ದು ಹೋಗಿದೆ.

ಈ ಎರಡು ಸೇತುವೆಗಳು ಅಪಾಯದಲ್ಲಿದ್ದು ಇಲ್ಲಿನ ಜನರು ಭಯಬೀತರಾಗಿದ್ದಾರೆ. ಆದ್ದರಿಂದ ಇದಕ್ಕೆ ತಕ್ಷಣ ಗ್ರಾ.ಪಂ. ಮತ್ತು ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಕೇಳಿಕೊಂಡಿದ್ದಾರೆ.

Leave a Comment