ಭಾರತೀಯ ಸೇನೆಯಿಂದ ಮಹಿಳೆಯರಿಗೆ ಬೈಕ್ ರ್‍ಯಾಲಿ| ಸುಳ್ಯದ ವೃಷ್ಟಿ ಮಲ್ಕಜೆ ಆಯ್ಕೆ

ಸಮಗ್ರ ವಾರ್ತೆ: ಕಾರ್ಗಿಲ್‌ ವಿಜಯ ದಿನದ ಗೌರವಾರ್ಥ ಭಾರತೀಯ ಸೇನೆಯು 25 ಮಹಿಳೆಯರ ಆಲ್‌ವುಮೆನ್‌ ಬೈಕ್‌ ರ್‍ಯಾಲಿ ಆಯೋಜಿಸಿದ್ದು, 2000 ಕಿ.ಮೀ. ಮಾರ್ಗದ ಈ ರ್‍ಯಾಲಿಯಲ್ಲಿ ಕರ್ನಾಟಕದಿಂದ ಪಾಲ್ಗೊಂಡಿದ್ದ ಇಬ್ಬರಲ್ಲಿ ಸುಳ್ಯ ತಾಲೂಕಿನ ಪಂಜ ಸಮೀಪದ ವೃಷ್ಟಿ ಮಲ್ಕಜೆ ಕೂಡ ಸೇರಿದ್ದಾರೆ. ಇವರು ಪುತ್ತೂರು ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಪುರುಷೋತ್ತಮ ಮಲ್ಕಜೆ ಹಾಗೂ ಉಷಾ ಮಲ್ಕಜೆ ದಂಪತಿಯ ಪುತ್ರಿ.

ಜು.4ರಂದು ಹಿಮಾಚಲ ಪ್ರದೇಶದ ಲೇಹ್‌ನಿಂದ ಆರಂಭಗೊಂಡ ರ್‍ಯಾಲಿ ಲಡಾಕ್‌ನ ವಿವಿಧ ಸ್ಥಳಗಳ ಮೂಲಕ ಕಾರ್ಗಿಲ್‌ ಹುತಾತ್ಮರ ಸ್ಮಾರಕಕ್ಕೆ ತಲುಪಿತು. ಪ್ರಪಂಚದ ಅತ್ಯಂತ ಎತ್ತರದ ಬೈಕ್‌ ಪಾಸಿಂಗ್‌ ಪ್ರದೇಶಗಳಾದ ಕರದುಂಗ್‌ ಲಾ ಮತ್ತು ಓಮ್ಲಿಂಗ್‌ ಲಾನಂತಹ ಆಮ್ಲಜನಕದ ಕೊರತೆ ಇರುವ ಪರ್ವತಗಳಲ್ಲೂ ಬೈಕ್‌ನಲ್ಲಿ ಸಂಚರಿಸಿ ಕಡಿದಾದ ರಸ್ತೆ, ಹೊಳೆಗಳನ್ನು ದಾಟಿ ಮುನ್ನುಗ್ಗಿದ್ದಾರೆ.

ಪ್ರಸ್ತುತ ವೃಷ್ಟಿ ಬೆಂಗಳೂರಿನ ಇ.ವೈ. ಕಂಪೆನಿಯ ಉದ್ಯೋಗಿಯಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಟಿವಿಎಸ್‌ ರೇಸಿಂಗ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆಗೊಂಡಿದ್ದ ವೃಷ್ಟಿ ಅಲ್ಲಿಂದ ಈ ರ್ಯಾಲಿಯ ಅಪರೂಪದ ಅವಕಾಶ ಪಡೆದಿದ್ದರು.

ಸಲ್ಲಿಸಲು ಭಾರತೀಯ ಸೇನೆಯು ಇತ್ತೀಚೆಗಷ್ಟೇ ಟಿವಿಎಸ್‌ ಮೋಟಾರ್‌ ಕಂಪೆನಿ ಜತೆಗೂಡಿ ನಾರಿ ಶಕ್ತಿ ಕಾರ್ಯ ಕ್ರಮದಡಿ 25 ಮಹಿಳಾ ಬೈಕರ್‌ಗಳ ವಿಶಿಷ್ಟ ರ್‍ಯಾಲಿ ಆಯೋಜಿಸಿತ್ತು. ಇದರಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಸೇನಾ ಕುಟುಂಬದ ಮಹಿಳೆಯರು ಇದ್ದಾರೆ. ಆದರೆ ಸೇನಾ ಕುಟುಂಬದ ಹೊರತಾಗಿ ಭಾಗವಹಿಸಿದವರಲ್ಲಿ ವೃಷ್ಟಿ ಏಕೈಕ ಮಹಿಳೆ.

Leave a Comment