ಸುರತ್ಕಲ್: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ| 16 ಜಾನುವಾರುಗಳ ರಕ್ಷಣೆ| ಗೋಮಾಂಸ, ವಾಹನ ವಶ

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕೃಷ್ಣಾಪುರ 8ನೇ ಬ್ಲಾಕ್ ಬಳಿ ಮನೆಯಲ್ಲೇ ಭಾರಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವುದು ಭಾನುವಾರ ಪತ್ತೆಯಾಗಿದೆ. ಸ್ಥಳದಲ್ಲಿದ್ದ 16 ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಗೋಮಾಂಸ ಹಾಗೂ ಅದರ ಸಾಗಣೆಗೆ ಬಳಸುತ್ತಿದ್ದ ಆಟೊರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

ಸುಸಜ್ಜಿತ ಕಾಂಕ್ರಿಟ್ ಮನೆಯೊಂದರಲ್ಲಿ ಜಾನುವಾರುಗಳನ್ನು ಕಡಿದು ಮಾಂಸ ತಯಾರಿಸಿ ಸ್ಥಳೀಯ ಹೋಟೆಲ್‌ಗಳೂ ಸೇರಿದಂತೆ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಮುಖರು ನೀಡಿದ ಮಾಹಿತಿ ಆಧರಿಸಿ ಕೃಷ್ಣಾಪುರದ ಮನೆಯೊಂದಕ್ಕೆ ದಾಳಿ ನಡೆಸಿದಾಗ 16ಕ್ಕೂ ಹೆಚ್ಚು ಜಾನುವಾರುಗಳು ಪತ್ತೆಯಾಗಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ. ಕೆ.ಜಿ ಗಟ್ಟಲೆ ಗೋಮಾಂಸವೂ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment