ಸಮಗ್ರ ನ್ಯೂಸ್: ಒಂದು ಧರ್ಮವನ್ನು ಹೀಯಾಳಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಸುಳ್ಯ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಳ್ಯ ಎಸ್ಸೆ„ ಸಂತೋಷ್ ಅವರು ಎ. 4ರಂದು ಸೋಷಿಯಲ್ ಮೀಡಿಯಾದ ಮಾನಿಟರಿಂಗ್ ಸೆಲ್‌ನಲ್ಲಿ ಮೆಸೇಜ್‌ಗಳನ್ನು ಪರಿಶೀಲಿಸುತ್ತಿದ್ದ ವೇಳೆ ಎಕ್ಸ್ (ಟ್ವಿಟ್ಟರ್) ತಾಣದಲ್ಲಿ ವ್ಯಕ್ತಿಯೊಬ್ಬರು ಒಂದು ಧರ್ಮದವರು ಪ್ರಾರ್ಥನೆ ಮಾಡುವ ಸಾಂದರ್ಭಿಕ ಫೋಟೋದ ಕೆಳಗೆ ಗಿಬ್ಲಿ ಡಿಡ್ ದಿಸ್ ಎಂದು ನಮೂದಿಸಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟಾಗಿ ಗಲಾಟೆಯಾಗುವಂತೆ ಮಾಡುವ ಉದ್ದೇಶದಿಂದ ಒಂದು ಧರ್ಮದವರು ಪ್ರಾರ್ಥನೆ ಮಾಡುವ ಆಚಾರವನ್ನು ಹೀಯಾಳಿಸುವಂತೆ ಎ. 3ರಂದು ಪೋಸ್ಟ್ ಮಾಡಿದ್ದಾರೆ ಎಂದು ದೂರಿಲ್ಲಿ ತಿಳಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.