ಸುಳ್ಯ: ಚಲಿಸುತ್ತಿರುವ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಹುಚ್ಚಾಟ| ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸುಳ್ಯ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಯುವಕರ ತಂಡ ಹುಚ್ಚಾಟ ಮೆರೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿರುವ ಕಾರಿನ ಮೇಲ್ಭಾಗದ ಬಾಗಿಲು ತೆರೆದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ನಿಂತುಕೊಂಡಿದ್ದರು. ಇಬ್ಬರು ಹಿಂಬದಿ ಸೀಟಿನ ಎಡ ಹಾಗೂ ಬಲ ಬದಿಯ ಬಾಗಿಲಿನ ಭಾಗದಿಂದ ಮೇಲೆ ಬಂದಿದ್ದು, ಇಬ್ಬರು ಮುಂದಿನ ಎರಡೂ ಬಾಗಿಲಿನ ಚಾಲಕನ ಬದಿಯಿಂದಲೂ ಮೇಲೆದ್ದು ನಿಂತು ಹುಚ್ಚಾಟ ಮೆರೆಯುತ್ತಿರುವುದು ವಿಡಿಯೋದಲ್ಲಿದೆ.

ಯುವಕರ ಕೃತ್ಯವನ್ನು ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಚಿತ್ರೀಕರಣ ಮಾಡಿಕೊಂಡಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.
ಒಟ್ಟು ಆರು ಮಂದಿ ಯುವಕರು ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿ ಯುವಕರು ಹುಚ್ಚಾಟ ಮೆರೆದಿರುವವರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ ಪಿ ರವರು ಕೂಡಲೇ ಕಾರ್ಯ ಪ್ರವೃತ್ತ ರಾಗಿ ಯುವಕರನ್ನು ಸುಳ್ಯ ಪೇಟೆಯಲ್ಲಿ ವಶಕ್ಕೆ ಪಡೆದು ಅವರ ಮೇಲೆ ಅ ಕ್ರ 50/25 ಕಲಂ 281ಬಿ ಎನ್ ಎಸ್ 2023 ಮತ್ತು 184 ಐ ಎಂ ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.