ಲಯನ್ಸ್ ಕ್ಲಬ್ ವತಿಯಿಂದ ಮಡಪ್ಪಾಡಿ ಶಾಲೆಗೆ ಊಟದ ತಟ್ಟೆ ಕೊಡುಗೆ

ಗುತ್ತಿಗಾರು: ಲಯನ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇಲ್ಲಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ 60 ತಟ್ಟೆಗಳನ್ನು ಕೊಡುಗೆಯಾಗಿ ನೀಡಲಾಯಿತು.

ಗುತ್ತಿಗಾರು ಲಯನ್ಸ್ ಕ್ಲಬ್ ಗೆ ವಲಯ ಅಧ್ಯಕ್ಷ ಗಂಗಾಧರ್ ರೈ ಯವರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಈ ಕೊಡುಗೆಗಳನ್ನು ಶಾಲಾ ಶಿಕ್ಷಕ ಜಗದೀಶ್ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಕುಶಾಲಪ್ಪ ತುಂಬತ್ತಾಜೆ, ಪಿ. ಸಿ. ಜಯರಾಮ, ಆನಂದ ಗೌಡ ಅಂಬೆಕಲ್ಲು, ನಿತ್ಯಾನಂದ ಮುಂಡೋಡಿ, ಲೋಕಪ್ಪ ಗೌಡ ಶೀರಡ್ಕ ಮತ್ತು ಲಯನ್ಸ್ ಕ್ಲಬ್ ಗುತ್ತಿಗಾರು ಪದಾಧಿಕಾರಿಗಳು ಉಪಸ್ಥಿತರಿದ್ದರು