ಗುತ್ತಿಗಾರು: ಇಲ್ಲಿನ ಗ್ರಾ.ಪಂ ವ್ಯಾಪ್ತಿಯಲ್ಲಿ 1ಕೋಟಿ 20 ಲಕ್ಷದ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಗುತ್ತಿಗಾರು-ಕಮಿಲ ರಸ್ತೆಯ ಚತ್ರಪ್ಪಾಡಿ ಎಂಬಲ್ಲಿ ನೂತನ ಸೇತುವೆಗೆ 100ಲಕ್ಷ ಮತ್ತು ಪೈಕ- ಬಾಕಿಲ ರಸ್ತೆ ಅಭಿವೃದ್ಧಿಗೆ 20ಲಕ್ಷದ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆಯನ್ನು ನೆರವೆರಿಸಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ, ಸದಸ್ಯರುಗಳಾದ
ಮಾಯಿಲಪ್ಪ ಕೊಂಬೆಟ್ಟು, ಜಗದೀಶ ಬಾಕಿಲ, ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ ಪ್ರಮುಖರಾದ ವೆಂಕಟ್ ದಂಬೆಕೊಡಿ, ಮುಳಿಯ ಕೇಶವ ಭಟ್, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಪ್ರಮುಖರಾದ ರಾಧಾಕೃಷ್ಣ ತುಪ್ಪದ ಮನೆ, ಹರಿಶ್ಚಂದ್ರ ಕುಳ್ಳಂಪಾಡಿ, ಸತೀಶ್ ಮೂಕಮಲೆ, ರಾಕೇಶ್ ಮೆಟ್ಟಿನಡ್ಕ, ನವೀನ್ ಬಾಳುಗೊಡು, ತಿಲಕ ಕೊಲ್ಯ,ದೇವಿ ಪ್ರಸಾದ್ ಚಿಕ್ಮುಳಿ,ಹರ್ಷಿತ್ ಕಡ್ತಲ್ ಕಜೆ,
ಹಾಗೂ ಪ್ರಮುಖ ಕಾರ್ಯಕರ್ತರು ಹಾಗೂ ಊರವರು ಉಪಸ್ಥಿತರಿದ್ದರು.