ಅರಂತೋಡು: ಇಲ್ಲಿನ ಪಯಸ್ವಿನಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಣಿ-ಮೈಸೂರು ಹೆದ್ದಾರಿಯ ಅರಂತೋಡಿನ ಬಿಳಿಯಾರು ಪಯಸ್ವಿನಿ ಹೊಳೆಯ ಕಡೆಯಲ್ಲಿ ಸುಳ್ಯ ಪೊಲೀಸರು ಗಸ್ತು ತೆರಳುತ್ತಿದ್ದಾಗ ಟಿಪ್ಪರ್ ಲಾರಿಯಲ್ಲಿ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ. ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.