ಬಾಳಿಲ: ಮದುವೆ ನಿಗದಿಯಾಗಿದ್ದ ಯುವಕ‌‌ ನಾಪತ್ತೆ

ಬೆಳ್ಳಾರೆ: ಮದುವೆ ನಿಗದಿಯಾಗಿದ್ದ ಯುವಕ ಕಾಣೆಯಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಿಲದ ದೇರಂಪಾಲು ಶೀನಪ್ಪ ರೈ ಅವರ ಪುತ್ರ ಹರೀಶ್‌ ರೈ (38) ನಾಪತ್ತೆಯಾದವರು. ಅವರು 13 ವರ್ಷಗಳಿಂದ ಪುತ್ತೂರಿನ ಫೈನಾನ್ಸ್‌ ನಲ್ಲಿ ಸೀನಿಯರ್‌ ಎಕ್ಸಿಕ್ಯೂಟಿವ್‌ ಆಗಿದ್ದರು.

ಅವರಿಗೆ ದೂರದ ಸಂಬಂಧಿ ಯುವತಿ ಜತೆ ವಿವಾಹ ನಿಶ್ಚಯವಾಗಿತ್ತು. ಮಾ.20ರಂದು ಬೆಳಗ್ಗೆ 7.30ಕ್ಕೆ ಗಂಟೆಗೆ ಯುವತಿ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಬೈಕ್‌ನಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದಾರೆ ಎಂದು ಅಣ್ಣ ವೆಂಕಪ್ಪ ರೈ ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.