ಕನಕಮಜಲು: ಕೆರೆಗೆ ಬಿದ್ದ ಕಾಡುಕೋಣ ರಕ್ಷಣೆ

ಜಾಲ್ಸೂರು: ರಾತ್ರಿ ವೇಳೆ ಕೆರೆಗೆ ಬಿದ್ದ ಕಾಡುಕೋಣವನ್ನು ಜೆಸಿಬಿ ಬಳಸಿ ರಕ್ಷಿಸಲಾದ ಘಟನೆ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕುದ್ಕುಳಿಯಲ್ಲಿ ಸಂಭವಿಸಿದೆ.

ಇಲ್ಲಿನ ಕುದ್ಕುಳಿ ಚಂದ್ರಶೇಖರ ಅವರ ತೋಟಕ್ಕೆ ನುಗ್ಗಿದ್ದ ಕಾಡುಕೋಣ ಅಲ್ಲಿದ್ದ ಕೆರೆ ಬಿದ್ದು ಮೇಲೆ ಬರಲಾಗದೇ ಒದ್ದಾಡುತ್ತಿತ್ತು.

ಈ ಬಗ್ಗೆ ಮನೆಯವರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಜೆಸಿಬಿ ತರಿಸಿ ಕೆರೆಯ ಒಂದು ಭಾಗದಲ್ಲಿ ಅಗೆದು ಕಾಡುಕೋಣನನ್ನು ರಕ್ಷಿಸಿದರು. ಮೇಲೆ ಬಂದ ಕೂಡಲೇ ಕಾಡಿನತ್ತ ಓಡಿ ಹೋಯಿತು.