ಗುತ್ತಿಗಾರು.ಮಾ11: ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನಿನ್ನೆ(ಮಾ. 10) ರಾತ್ರಿ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ಸದಸ್ಯರುಗಳಾದ ಸೋಮಶೇಖರ ಕೇವಳ, ಜಯರಾಮ ಕಡ್ಲಾರು, ಯಂ. ಆರ್. ಪುರುಷೋತಮ ಮುಂಡೋಡಿ, ಗೀತಾ ತಿಮ್ಮಪ್ಪ ಕಡ್ಯ, ಜಾನಕಿ ಚಿದಾನಂದ ಪೆರಾಳಕಜೆ, ಶೂರಪ್ಪ ದೇವ, ಕರುಣಾಕರ ದೇವರಗುಂಡ ಹಾಗೂ ಮಾಜಿ ಸದಸ್ಯರುಗಳು, ಊರ ಭಕ್ತರು ಉಪಸ್ಥಿತರಿದ್ದರು.
ಕಂದ್ರಪ್ಪಾಡಿ ಜಾತ್ರೆಯು ಮಾ. 14ರಿಂದ ಮಾ.15ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.