ಬೆಳ್ಳಾರೆ: ಮನೆಯಿಂದ ಕಳವುಗೈದ ಪ್ರಕರಣ| ಆರೋಪಿಗಳ ಬಂಧನ

ಬೆಳ್ಳಾರೆ: ಮನೆಯಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಿದ ಕಾರು, ಕಳವಾದ ಸೊತ್ತುಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಬೆಳಂದೂರಿನ ಮೊಹಮ್ಮದ್‌ ನಿಜಾರ್‌ (25) ಹಾಗೂ ಬಜ್ಪೆಯ ಅಬ್ದುಲ್‌ ಮುನೀರ್‌ (28) ಬಂಧಿತರು.

ಕಡಬ ತಾಲೂಕಿನ ಬೆಳಂದೂರು ಗ್ರಾಮದ ಗಂಡಿನಾರು ಮನೆಯೊಂದರಿಂದ ಕಳವು ನಡೆದಿತ್ತು. ಫೆ. 6-7ರ ನಡುವಿನ ಸಮಯದಲ್ಲಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಒಟ್ಟು 1.43 ಲಕ್ಷ ರೂ. ಮೌಲ್ಯದ ಚಿನ್ನಭರಣ ಕಳವು ನಡೆಸಿದ್ದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇನ್ನೂ ಒರ್ವ ಆರೋಪಿ ಇದ್ದ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಗಳ ಪೈಕಿ ಅಬ್ದುಲ್‌ ಮುನೀರ್‌ ವಿರುದ್ಧ ಬೇರೆ ಬೇರೆ ಪೊಲೀಸ್‌ ಠಾಣೆಗಳಲ್ಲಿ 18 ಪ್ರಕರಣಗಳು ಹಾಗೂ ಇನ್ನೊಬ್ಬ ಆರೋಪಿ ಮೊಹಮ್ಮದ್‌ ನಿಜಾರ್‌ನ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದೆ.