ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ವಿಭಾಗದ “ರಾಜ್ಯ ಪ್ರಧಾನ ಕಾರ್ಯದರ್ಶಿ” ಯಾಗಿ ಲಕ್ಷ್ಮೀಶ ಗಬಲಡ್ಕ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಸೂಚನೆಯಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಚೇರ್ ಮೆನ್ ನಿಕೇತ್ ರಾಜ್ ಮೌರ್ಯ ನೇಮಕ ಮಾಡಿದ್ದಾರೆ.
ಈ ವೇಳೆ ಅವರಿಗೆ ಮೇಲಿನ ಹೊಣೆಗಾರಿಕೆಯನ್ನು ನೀಡಿದ್ದು, ನಿಷ್ಠೆಯಿಂದ ನಿರ್ವಹಿಸತ್ತಾ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ಸಹಕರಿಸಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೀರೆಂದು ಆಶಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಲಕ್ಷ್ಮೀಶ ಗಬ್ಲಡ್ಕ ಇವರು ಪ್ರಸ್ತುತ ಇವರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.