ಸುಳ್ಯ: ಜಯನಗರ ಶಾಲಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಮ್ನಿ ಕಾರು ಮನೆಯ ಗೋಡೆಗೆ ಗುದ್ದಿದ್ದು, ಮನೆಯ ಸಿಟೌಟ್‌ನಲ್ಲಿ ಆಟವಾಡುತ್ತಿದ್ದ 5 ವರ್ಷದ ಹೆಣ್ಣು ಮಗುವಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಫೆ. 26ರಂದು ಸಂಜೆ ಸಂಭವಿಸಿದೆ.
ಮಹಮ್ಮದ್ ಮೊಟ್ಟೆತ್ತೋಡಿ ಅವರ ಮನೆಯ ಸಿಟೌಟಿನ ಮೇಲೆ ಬಂದಿರುವ ಕಾರು ಮೆಟ್ಟಿಲು ಬಳಿ ಇರುವ ಗೋಡೆಯ ಮೂಲೆಯನ್ನು ಒಡೆದು ಪಕ್ಕದಲ್ಲಿರುವ ಮೇಲ್ಚಾವಣಿಯ ಸಪೋರ್ಟ್ ಕಂಬಕ್ಕೆ ಗುದ್ದಿದೆ.
ಇದಕ್ಕೂ ಮುನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಗೂ ಢಿಕ್ಕಿ ಹೊಡೆದಿತ್ತು. ಈ ವೇಳೆ ಮನೆಯ ಮೆಟ್ಟಿಲು ಬಳಿ ಮಗು ಆಟವಾಡುತ್ತಿತ್ತು. ಮಗುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿಯ ಪರಿಚಯದ ಯುವಕ ಕಾರಿನ ಟ್ರಯಲ್ ನೋಡಲು ಚಲಾಯಿಸಿದ್ದು, ಈ ವೇಳೆ ಆತನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಅಲ್ಪಸಮಯ ಮೊದಲು ಇದೇ ಸ್ಥಳದಲ್ಲಿ ಇನ್ನೂ ಮೂರು, ನಾಲ್ಕು ಮಂದಿ ಮಕ್ಕಳು ಆಟವಾಡುತ್ತಿದ್ದರು ಎನ್ನಲಾಗಿದೆ.