ಪಂಜ: ಇಲ್ಲಿನ ಪಂಜ ಪೇಟೆ ಸಮೀಪ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವುದನ್ನು ಫೆ.22ರಂದು ರಾತ್ರಿ ಪತ್ತೆ ಹಚ್ಚಲಾಗಿದೆ.
ಕೇರಳ ನೋಂದಣಿಯ ಕಾರಿನಲ್ಲಿ ಬಳ್ಳಕ ಪಂಜ ರಸ್ತೆಯಲ್ಲಿ ಜಾನುವಾರು ಸಾಗಿಸುತ್ತಿದ್ದ ಮಾಹಿತಿಯನ್ನು ಸಂಘಟನೆಯವರು ಪೊಲೀಸರಿಗೆ ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಾನುವಾರು, ಕಾರು ಮತ್ತು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.