ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಗುತ್ತಿಗಾರು: ಇಲ್ಲಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ.

ವ್ಯವಸ್ಥಾಪನ ಸಮಿತಿಯ ನೂತರ ಸದಸ್ಯರುಗಳಾಗಿ ಕೇಶವ ಹೊಸೋಳಿಕೆ, ಮಿತ್ರದೇವ ಮಡಪ್ಪಾಡಿ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ ರುದ್ರ ಚಾಮುಂಡಿ, ಸನತ್ ಮುಳುಗಾಡು, ಶ್ರೀಮತಿ ಉಷಾ ಪುರುಷೋತ್ತಮ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಸಮಿತಿ ಸದಸ್ಯರಾಗಿ ಇರಲಿದ್ದಾರೆ.‌

ದೇಗುಲದ ವ್ಯವಸ್ಥಾಪನಾ ಸಮಿತಿಯಲ್ಲಿ ಒಂಬತ್ತು ಜನರಿಗೆ ಅವಕಾಶವಿದ್ದು, ನೂತನ ಸಮಿತಿಯಲ್ಲಿ 8 ಜನರನ್ನು ಮಾತ್ರ ನೇಮಕ ಮಾಡಲಾಗಿದೆ. ಈ ಸಮಿತಿಯಲ್ಲಿ ಒಂದು ಮಹಿಳಾ ಸ್ಥಾನ ಖಾಲಿ ಇದ್ದು ಅದು ಇನ್ನಷ್ಟೇ ಭರ್ತಿಯಾಗಬೇಕಿದೆ.