ಗುತ್ತಿಗಾರು: ಸದಾ ಸಮಾಜಮುಖಿಯಾಗಿದ್ದರೂ ತೆರೆಮರೆಯಲ್ಲಿರಲು ಬಯಸುವ ಯುವ ನಾಯಕ ಪ್ರವೀಣ್ ಮುಂಡೋಡಿ ಮೊದಲ ಬಾರಿ ” ರೈತ ಸಹಕಾರ ಭಾರತ” ದ ನೇತೃತ್ವ ವಹಿಸಿಕೊಂಡು, ಸನತ್ ಮುಳುಗಾಡು,ಸುಧಾಕರ ಮಲ್ಕಜೆಯವರಂತಹ ಯುವ ನಾಯಕರ ಜೊತೆಗೂಡಿ ಸಹಕಾರಿ ಕ್ಷೇತ್ರದ ಚುನಾವಣಾ ಸ್ಪರ್ಧೆಗಿಳಿದಿದ್ದು , ವಿವಿಧ ಪಕ್ಷಗಳ ನಾಯಕರು ಮತ್ತು ಯುವ ಸಮುದಾಯದ ಗಮನಸೆಳೆದಿದ್ದಾರೆ
ನಾಳೆ ( ಫೆಬ್ರವರಿ 23 ರಂದು ) ನಡೆಯಲಿರುವ ಗುತ್ತಿಗಾರು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಿ ತನ್ನದೇ ಕಾರ್ಯಶೈಲಿಯಲ್ಲಿ ಪ್ರಸಕ್ತ ಕಾಲದ ತಂತ್ರಜ್ಞಾನಗಳ ಅರಿವಿರುವ ಯುವ ವಿದ್ಯಾವಂತ ಸದಸ್ಯರೊಡಗೂಡಿ ಪ್ರಚಾರಕಾರ್ಯದಲ್ಲಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ
ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿಯಲ್ಲಿ ಅಧಿಕಾರ ಒಂದೇ ಪಕ್ಷ ಅಥವಾ ಗುಂಪು ನಿರಂತರ ಆಡಳಿತ-ಅಧಿಕಾರ ನಡೆಸುತಿದ್ದರೆ ಅದು ತಮ್ಮ ಇಚ್ಛಾನುಸಾರದ ಆಡಳಿತಕ್ಕೆ ಕಾರಣವಾಗಿ ಜನಸಾಮಾನ್ಯರ ನ್ಯಾಯ ನಿರೀಕ್ಷೆಗಳು ಮರೀಚಿಕೆಯಾಗುತಿವೆ ಎನ್ನುವ ಜಾಗೃತಿ ಮೂಡಿಸುತ್ತಿದ್ದಾರೆ.
ಯಾರಿವರು..?
ದೇವಚಳ್ಳ ಗ್ರಾಮದ ಪ್ರತಿಷ್ಠಿತ ಮಂಡೋಡಿ ಮನೆತನದವರಾಗಿದ್ದು, ತಂದೆ ಸರಕಾರಿ ವಕೀಲರಾಗಿದ್ದ ದಿ|ಮುಂಡೋಡಿ ರಾಮಚಂದ್ರಗೌಡ ಹಾಗೂ ತಾಯಿ ಧರ್ಮಾವತಿಯವರ ಪುತ್ರ. ಹಿರಿಯ ರಾಜಕೀಯ ಧುರೀಣರಾಗಿದ್ದ ಜಾಕೆ ಪರಮೇಶ್ವರ ಗೌಡರ ಮೊಮ್ಮಗ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸದಿಂದ ಪದವಿ ಶಿಕ್ಷಣದವರೆಗೆ ಪುತ್ತೂರಿನಲ್ಲಿ ಪಡೆದರು. ಕಾಲೇಜು ಜೀವನದಲ್ಲಿ ಎಬಿವಿಪಿ ಹಾಗೂ ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದವರು.
ಮುಂದೆ ಮಂಗಳೂರಿನಲ್ಲಿ ಡಿಪ್ಲೋಮಾ ಇನ್ ಮಲ್ಟಿಮೀಡಿಯ ಹಾಗೂ ಮುಂಬೈನಲ್ಲಿ ತ್ರೀಡಿ ಅನಿಮೇಷನ್ ಅಂಡ್ ಸ್ಪೆಷಲ್ ಎಫೆಕ್ಟ್ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು ಮುಂದೆ ಉಡುಪಿಯಲ್ಲಿ ಕ್ಲಿಕ್ಕೇನ್ ಎಡಿಟ್ ಎಂಬ ಸಂಸ್ಥೆ ಸ್ಥಾಪಿಸಿದರು.
ರಾಜಕೀಯ ಹಿನ್ನೆಲೆ:
ಜನತಾದಳದಿಂದ ರಾಜಕೀಯ ಜೀವನ ಪ್ರಾರಂಬಿಸಿರುವ ಪ್ರವೀಣ್, ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ಎಲ್. ಬೋಜೇಗೌಡರೊಂದಿಗೆ ನಿಕಟ ಸಂಪರ್ಕ ಹೊಂದಿದವರು. ಜಿಲ್ಲಾ ಯುವ ಜನತಾದಳದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಮಾಜ ಸೇವೆ:
ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ಬಿನ ಸದಸ್ಯರಾಗಿರುವ ಪ್ರವೀಣ್ ಯುವ ತೇಜಸ್ ತಂಡ ಹಾಗು ಒಕ್ಕಲಿಗ ಗೌಡ ಸೇವಾ ವಾಹಿನಿಯ ಸದಸ್ಯರು. ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರರೊಂದಿಗೆ ಆತ್ಮೀಯ ಒಡನಾಟ, ಸರಳ ಸಜ್ಜನಿಕೆಯ ಗುಣಗಳೊಂದಿಗೆ ಸಮಾಜದ ವಿವಿಧ ಸ್ತರದವರೊಂದಿಗೆ ಆತ್ಮೀಯರಾಗಿ ಬೆರೆಯುವ ಗುಣವುಳ್ಳವರು. ಉತ್ತಮ ಭಾಷಣಕಾರರು ಹೌದು.
ಮುಂಡೋಡಿ ಮನೆತನದ ಹಿರಿಯ ಕಾಂಗ್ರೆಸ್ ಧುರೀಣರಾದ ಭರತ್ – ನಿತ್ಯಾನಂದ ಮುಂಡೋಡಿ ಸಹೋದರರ ಬಳಿಕ ಎರಡನೇ ತಲೆಮಾರಿನ ಯುವ ಧುರೀಣರಾಗಿದ್ದಾರೆ.