ಗುತ್ತಿಗಾರು: ಲಯನ್ಸ್ ಕ್ಲಬ್ ಗೆ ವಲಯಾಧ್ಯಕ್ಷರ ಭೇಟಿ

ಗುತ್ತಿಗಾರು:ಫೆ.20: ಇಲ್ಲಿನ ಲಯನ್ಸ್ ಕ್ಲಬ್ ಗೆ ಲಯನ್ಸ್ ಕ್ಲಬ್ ವಲಯಾಧ್ಯಕ್ಷರಾದ ಲ| ರೂಪಾಶ್ರೀ.ಜೆ ರೈ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಇತ್ತೀಚಿಗೆ‌ ಲಯನ್ಸ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಲ.ರೂಪಾಶ್ರೀ ಜಿ. ರೈ – ಲ.ಜಯಂತ್ ರೈ ದೀಪ‌ಬೆಳಗಿ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಗುತ್ತಿಗಾರಿನ ಅಧ್ಯಕ್ಷರಾದ ಲ| ಕುಶಾಲಪ್ಪ ತುಂಬತ್ತಾಜೆ ರವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಾಹಿತಿ ಹಾಗೂ ರಂಗ ನಿರ್ದೇಶಕರಾದ ಯೋಗೀಶ್ ಹೊಸೋಳಿಕೆ, ಬರಹಗಾರರು ಹಾಗೂ ಪತ್ರಕರ್ತ ಉಲ್ಲಾಸ್ ಕಜ್ಜೋಡಿ, ಹೈ ಜಂಪ್ ನಲ್ಲಿ ರಾಜ್ಯಮಟ್ಟಕ್ಕೆ ತಲುಪಿದ ವಿವೇಕ್ ಎರ್ಧಡ್ಕ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗುತ್ತಿಗಾರು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲ| ವೆಂಕಪ್ಪ ಕೇನಾಜೆ, ಕೋಶಾಧಿಕಾರಿ ಲ| ಮಣಿಯಾನ ಪುರುಷೋತ್ತಮ ಹಾಗೂ ಲ| ಜಯರಾಮ್ ಕಡ್ಲಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ಕುಶಾಲಪ್ಪ ತುಂಬಾತ್ತಾಜೆ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಪ್ಪ ಕೇನಾಜೆ ವರದಿ ವಾಚಿಸಿದರು. ಕೋಶಾಧಿಕಾರಿ ಪುರುಷೋತ್ತಮ ಮಣಿಯಾನ ವಂದಿಸಿದರು.