ಕಂದ್ರಪ್ಪಾಡಿ: ಧ.ಗ್ರಾ.ಯೋಜನೆ ವತಿಯಿಂದ ಶ್ರಮದಾನ

ಗುತ್ತಿಗಾರು: ಕಂದ್ರಪ್ಪಾಡಿ ರಾಜ್ಯದೈವ, ಪುರುಷದೈವ ಸಾನಿಧ್ಯದಲ್ಲಿ ನಡೆಯಲಿರುವ ಜಾತ್ರೋತ್ಸವದ ಪ್ರಯುಕ್ತ ಫೆ16 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂದ್ರಪ್ಪಾಡಿಯ ಒಕ್ಕೂಟದ ಸದಸ್ಯರಿಂದ ಶ್ರಮದಾನ ನಡೆಯಿತು. ಸೇವಾಪ್ರತಿನಿಧಿ ತಿಮ್ಮಪ್ಪ ಕಡ್ಯ ಹಾಗೂ ಸ್ವಸಹಾಯ ಮತ್ತು ಪ್ರಗತಿಬಂಧು ಸಂಘಗಳ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.