ಕಂದ್ರಪ್ಪಾಡಿ ಜಾತ್ರಾ ಮುಹೂರ್ತ

ಗುತ್ತಿಗಾರು.ಫೆ.10: ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನ, ಇದರ ಜಾತ್ಸವಕ್ಕೆ ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವುದರ ಮೂಲಕ ಮುಹೂರ್ತ ನಡೆಸಲಾಯಿತು.

ಇಂದು (ಫೆ. 10) ಬೆಳಿಗ್ಗೆ 9:00ಕ್ಕೆ ಸರಿಯಾಗಿ ಮಣಿಯಾನದಲ್ಲಿರುವ ಶ್ರೀ ಶಂಖಚೂಡ ಕ್ಷೇತ್ರದಲ್ಲಿ ವಾಡಿಕೆಯ ಸಂಪ್ರದಾಯದಂತೆ ಕಂಚಿ ಕಲ್ಲಿಗೆ ತೆಂಗಿನ ಕಾಯಿ ಒಡೆಯಲಾಯಿತು. ಮಾ.14, 15ರಂದು ಜಾತ್ರೋತ್ಸವ ನಡೆಯಲಿದೆ.