ನೆಟ್ಟಣ: ಇಲ್ಲಿನ ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿಯಾಗಿದ್ದು ನಾಮಪತ್ರ ಸಲ್ಲಿಕೆಗೆ ಇಂದು(ಫೆ.8) ಕೊನೆಯ ದಿನಾಂಕವಾಗಿತ್ತು ಇಂದು ರೈತಾಪಿ ಸಹಕಾರಿ ಅಭಿವೃದ್ಧಿ ರಂಗದ 12 ಸದಸ್ಯರು ನಾಮಪತ್ರ ಸಲ್ಲಿಸಿದರು
ರೈತಾಪಿ ಸಹಕಾರಿ ಅಭಿವೃದ್ಧಿ ರಂಗದ ಅಡಿಯಲ್ಲಿ ಸಾಮನ್ಯದಿಂದ ಪ್ರದೀಪ್ ಕಳಿಗೆ, ಸತೀಶ್ ಕಳಿಗೆ, ರವಿ ಕುಮಾರ್ ಪುಯಿಲ , ಚಂದ್ರಶೇಖರ ಕಾಪಾರು, ವಿನೀಶ್ ಬಿಳಿನೆಲೆ ಪ್ರವರ್ಗ ಎ ಇಂದ ಮನೋಜ್ ಪ್ರವರ್ಗ ಬಿ ಇಂದ ಪದ್ಮನಾಭ ದೇರಣೆ ಪರಿಶಿಷ್ಟ ಪಂಗಡ ದಿಂದ ಉಮೇಶ್ ನಾಯ್ಕ್ ಸಣ್ಣಾರ ಪರಿಶಿಷ್ಟ ಜಾತಿ ಇಂದ ಶಶಿಧರ್ ಬೊಟ್ಟಡ್ಕ ಮಹಿಳಾ ಮೀಸಲಿನಿಂದ ಭವ್ಯ ಸಂತೋಷ್ ಚಿದ್ಗಲ್ ಹಾಗೂ ವೇದಾವತಿ ಶಿವರಾಮ ಸಾಲಗಾರ ರಹಿತ ಕ್ಷೇತ್ರದಿಂದ ರೇಖಾ ಡಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತಾಪಿ ಸಹಕಾರಿ ಅಭಿವೃದ್ಧಿ ರಂಗದ ಬಿಳಿನೆಲೆ ಉಸ್ತುವಾರಿ ಅಭಿಲಾಷ್ ಪಿ ಕೆ ಪಂಚಾಯತ್ ಅಧ್ಯಕ್ಷೆ ಶಾರದ ದಿನೇಶ್ ಉಪಾಧ್ಯಕ್ಷ ಶಿವಶಂಕರ ಬಿಳಿನೆಲೆ ಹಿರಿಯ ಸಹಕಾರಿಗಳಾದ ಕಿಶೋರ್ ಕುತೂರು. ಉಮಾಶ್ರಿ ಕೊಂಬಾರ್, ಧವನ್ ಕಳಿಗೆ ಉಪಸ್ಥಿತರಿದ್ದರು. ಸಹಕಾರ ಸಂಘಕ್ಕೆ ಫೆ.೧೬ರಂದು ಚುನಾವಣೆ ನಡೆಯಲಿದೆ.