ಮಂಡೆಕೋಲು: ಗಂಡಾನೆಯ ಮೃತದೇಹ ಪತ್ತೆ| ಗಜಕಾಳಗದಲ್ಲಿ ಮೃತಪಟ್ಟಿರುವ ಶಂಕೆ

ಮಂಡೆಕೋಲು: ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಂಡೆಕೋಲು ಗ್ರಾಮದ ಕನ್ಯಾನ ಕಾಡಿನಲ್ಲಿ ಆನೆಯೊಂದು ಸಾವಿಗೀಡಾಗಿದ್ದು ಆನೆಯ ಕಳೇಬರ ಪತ್ತೆಯಾಗಿದೆ.

ಸಂಜೆ ಕಾಡಿಗೆ ಕಟ್ಟಿಗೆಗೆ ಹೋದವರಿಗೆ ಸತ್ತ ಆನೆಯ ಮೃತದೇಹ ಕಂಡು ಬಂದಿದ್ದು, ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ತೆರಳಿದ್ದು ತನಿಖೆ ನಡೆಸಿರುವುದಾಗಿ ತಿಳಿದುಬಂದಿದೆ.

ಮೇಲ್ನೋಟಕ್ಕೆ ಆನೆಗಳ ನಡುವಿನ ಗಜ ಕಾಳಗದಲ್ಲಿ ಗಾಯಗೊಂಡು ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಮರಣೋತ್ತರ ಪರೀಕ್ಷೆಯಿಂದ ನಿಖರ ಕಾರಣ ಬಯಲಾಗಬೇಕಿದೆ.