ಜಾಲ್ಸೂರು: ಇಲ್ಲಿನ ಕನಕಮಜಲು ನರಿಯೂರು ರಾಮಣ್ಣ ಗೌಡ ಸ್ಮಾರಕ ಸ.ಹಿ.ಪ್ರಾ ಶಾಲೆಯಲ್ಲಿ ಹಾರಿಸಿದ ರಾಷ್ಟ್ರಧ್ವಜ ಸಂಜೆಯಾದರೂ ಅವರೋಹಣವಾಗದೆ ರಾತ್ರಿಯಲ್ಲೂ ಹಾರಾಡಿದ ಘಟನೆ ಇಂದು (ಜ.26) ನಡೆದಿದೆ.
ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಇಂದು ಮುಂಜಾನೆ ಶಾಲೆಯಲ್ಲಿ ಧ್ವಜಾರೋಹಣ ನಡೆದಿತ್ತು. ಆದರೆ ಸಂಜೆ ವೇಳೆಗೆ ಇಳಿಸಬೇಕಾದ ರಾಷ್ಟ್ರಧ್ವಜ ರಾತ್ರಿಯಾದರೂ ಹಾರಾಡುತ್ತಿದ್ದು ಧ್ವಜಕ್ಕೆ ಅವಮಾನವಾಗಿದೆ.