ಗುತ್ತಿಗಾರು: ಪೇಟೆಯಲ್ಲೇ ಜನರ ಮೇಲೆರಗಿದ ಕಾಡುಹಂದಿ| ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರಿಗೆ ಗಾಯ

ಗುತ್ತಿಗಾರು: ಇಲ್ಲಿನ ಪೇಟೆಯಲ್ಲಿ ಕಾಡು ಹಂದಿಗಳು ಪೇಟೆಗೆ ಬಂದು ದಾಳಿ ನಡೆಸಿ ವಿದ್ಯಾರ್ಥಿಗಳನ್ನು ಗಾಯಗೊಳಿಸಿದ ಘಟನೆ ವರದಿಯಾಗಿದೆ. ಗುತ್ತಿಗಾರಿನಿಂದ ಮೊಗ್ರ ಕಡೆಗೆ ಹೋಗುವ ರಸ್ತೆಯ ಬದಿ ಕಾಡುಹಂದಿಗಳು ಏಕಾಏಕಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಕರೆದೊಯ್ದು ಸುಳ್ಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡುಹಂದಿಗಳು ಗುತ್ತಿಗಾರು ಕೆಳಗಿನ ಪೇಟೆಯಿಂದ ಮೇಲಿನವರೆಗೆ ಪೇಟೆಯಲ್ಲೇ ಸಂಚರಿಸುವ ವೇಳೆ ಘಟನೆ ನಡೆದಿದೆ. ಕಾಡು ಹಂದಿಗಳು ಪೇಟೆಯ ಬದಿಯಲ್ಲೇ ತಿರುಗಾಡುತ್ತಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.