ನಾಲ್ಕೂರು:ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಗುತ್ತಿಗಾರು.ಜ.16: ನಾಲ್ಕೂರು ಗ್ರಾಮದ ನಡುಗಲ್ಲು ಪರಿಸರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಿತು.

ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ, ಆಟೋರಿಕ್ಷಾ ನಿಲ್ದಾಣ, ಬಸ್ಸು ತಂದು ದಾಣವನ್ನು ಉದ್ಘಾಟಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ ಹಾಗೂ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ ಇವರುಗಳು ಶೌಚಾಲಯವನ್ನು ಉದ್ಘಾಟಿಸಿದರು. ರಿಕ್ಷಾ ನಿಲ್ದಾಣವನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯ ಮುಳಿಯ ಕೇಶವ ಭಟ್ಟರವರು ಉದ್ಘಾಟಿಸಿದರು. ಗುತ್ತಿಗಾರು ಪ್ರಾ.ಕೃ.ಪ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಶುಭ ಹಾರೈಸಿದರು.

ಬಸ್ ತಂಗುದಾಣ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ. ಕುಮಾರಿ ಭಾಗಿರಥಿ ಮುರುಳ್ಯ ನೆರವೇರಿಸಿ ಮಾತನಾಡಿ, ಊರಿನವರ ಸಹಭಾಗಿತ್ವದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮತ, ಹರೀಶ್ ಕೊಯಿಲ, ಪ್ರಮೀಳಾ ಭಾಸ್ಕರ್ ಎರ್ಧಡ್ಕ, ಲೀಲಾವತಿ ಅಂಜೇರಿ ಸೇರಿದಂತೆ ಊರಿನ ಪ್ರಮುಖರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರಿಶ್ಚಂದ್ರ ಕುಳ್ಳಂಪಾಡಿ. ಕಾರ್ಯಕ್ರಮ ನಿರೂಪಿಸಿದರು.