ಗುತ್ತಿಗಾರು. ಇಲ್ಲಿನ ಹಲವು ಅಂಗಡಿಗಳಿಗೆ ನುಗ್ಗಿದ ಕಳ್ಳರು ಕೈಚಳಕ ನಡೆಸಿದ ಘಟನೆ ಜ.13ರ ತಡರಾತ್ರಿ ನಡೆದಿದೆ.
ಗುತ್ತಿಗಾರು ಬಸ್ ನಿಲ್ದಾಣದ ಮುಂಭಾಗದ ತರಕಾರಿ ಅಂಗಡಿ, ಪಕ್ಕದ ಕಟ್ಲೇರಿ ಅಂಗಡಿ, ಮೇಲಿನ ಪೇಟೆಯ ಮುತ್ತಪ್ಪ ನಗರದ ಗುಡಿಯ ಕಾಣಿಕೆ ಹುಂಡಿಗೆ ಕನ್ನ ಹಾಕಿರುವುದಾಗಿ ತಿಳಿದುಬಂದಿದೆ.
ಅಂಗಡಿಗಳಿಂದ ನಗ- ನಗದು ಕಳವುಗೈದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.